ಬಾಲ್ಯದಲ್ಲಿ ಕದ್ದು ತಿನ್ನುವ ಚಪಲವಂತೂ ಬಹುತೇಕ ಮಂದಿಗೆ ಇದ್ದೇ ಇರುತ್ತದೆ... ಒಂದು ದಿನ ಶಾಲೆ ಮುಗಿದ ಬಳಿಕ ಅಂದು ಶನಿವಾರವಿರಬೇಕೆಂಬುದು ನನ್ನ ನೆನಪು...
ಗದ್ದೆ ಪುಣಿಯಿಂದಾಗಿ ನಮ್ಮ ಪಟಾಲಂ ಹೊರಟಿತು... ಈ ಗದ್ದೆ ಪುಣಿಯಿಂದಾಗಿ ಸುತ್ತಿ ಬಳಸಿ ಹೋಗಲು ಕಾರಣವೂ ಇದೆ... ಅದೇ ದಾರಿಯಲ್ಲಿ ನಮ್ಮ ಅದ್ದಾಕ ರ ಸೂಪರ್ ಉಪ್ಪಿನಕಾಯಿಯ ಫ್ಯಾಕ್ಟರಿ ಸಿಗ್ತಾ ಇತ್ತು..ಉಪ್ಪಿನಕಾಯಿಯ ಮಾವಿನ ಹೋಳೊಂದನ್ನು ಕೈಗೆ ಹಾಕಿಸಿಕೊಂಡು ಚಪ್ಪರಿಸುತ್ತಾ ಮನೆಯ ದಾರಿ ಹಿಡಿಯುತಿದ್ದೆವು...
ಎಂದಿನಂತಯೇ ಅಂದೂ ನಾವು ಹೊರಟೆವು..ದಾರಿಯಲ್ಲಿ ಮೈ ಪೂರಾ ಒಡವೆ ದರಿಸಿದಂತೆ ಕಣ್ಣಿಗೆ ಕುಕ್ಕುತ್ತಿತ್ತು ಗುರುವಪ್ಪನ ಪುಳಿಯ ಮರ (ಹುಣಸೇ ಹಣ್ಣಿನ) ... ಒಬ್ಬೊಬ್ಬರೇ ಮುಖಮುಖ ನೋಡಲು ಶುರು ಹಚ್ಚಿದರು ನಾನು ಮುಖ ನೋಡಲು ತಲೆಯೆತ್ತಿದಾಗ ನಮ್ಮ ಪೈಕಿ ಮೂವರು ಮರ ಹತ್ತಿಯಾಗಿತ್ತು...
ನಾವು ಕೆಲವರು ಹಿಂದುಳಿದ.ವರ್ಗಕ್ಕೆ ಒಳಪಟ್ಟವರು ಯಾಕೆಂದರೆ ನಮಗೆ ಅವರಷ್ಟು ವೇಗವಾಗಿ ಮರ ಹತ್ತಲಾಗುತ್ತಿರಲಿಲ್ಲ... ನಾವೇನಿದ್ದರೂ ಸಿಕ್ಕ ಸಿಕ್ಕ ಪೊದೆಯೊಳಗೆ ಕೈ ತೂರಿಸಿ ಹಣ್ಣು ಹೆಕ್ಕಲು ಮಾತ್ರ ಮೀಸಲು..
ಹೇಗೂ ನಾಲ್ಕೈದು ಪುಳಿ ಉದುರಿಸಿಯಾಗಿತ್ತು.. ಇನ್ನೇನು ಪುಳಿಯ ಜೊಂಕೆ (ಗೊಂಚಲು)ಗೆ ಕೈ ಹಾಕಬೇಕನ್ನುವಷ್ಟರಲ್ಲಿ ಎಲ್ಲಿಂದಲೋ ಒಂದು ಭಯಂಕರ backround voice ಅಬ್ಬರಿಸಿ ಬಂತು.. "ಏರ್ ಯಾ ಅವು ***ಮಗೆ ****ಮಗೆ***..
.... (ಯಾರೋ ಅದು *** ಮಗ ***ಮಕ್ಳಾ
) ಮರದೊಡೆಯ ಗುರುವಪ್ಪ ದಾಪುಗಾಲಿಡುತ್ತಾ ಬರುತ್ತಿದ್ದ...
ಕೆಳಗಿದ್ದ ನಾವೆಲ್ಲ ಎದ್ದೆನೋ ಬಿದ್ದೆನೋ ಅಂತ ಜೇಬು ಸರಿಪಡಿಸಿಕೊಂಡು ಓಡಿದೆವು... ಮರದ ಮೇಲಿದ್ದವರು ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಸರಸರ ನೆ ಜಾರಿ ಮರದ ಬುಡದಲ್ಲಿದ್ದರು...ಒಬ್ಬನನ್ನು ಹೊರತುಪಡಿಸಿ...ಆತ ಮರದ ತುದಿಯಲ್ಲೇ ಮೊಕ್ಕಾಂ ಹೂಡಿದ್ದ.. ನಾವೆಲ್ಲಾ ದೂರದಿಂದಲೇ ಆತನ ಅಸಾಮಾನ್ಯ ಧೈರ್ಯವನ್ನು ಹೊಗಳಿದ್ದೇ ಹೊಗಳಿದ್ದು..
ಪಕ್ಕದಲ್ಲಿದ್ದವನೊಬ್ಬ ಹೇಳುತ್ತಿದ್ದ, "ಹೇ! ಅವನದ್ದು ಬಯಂಕರ ದೈರ ಮಾರೇ ಅವ ಮೊದಲಿನಿಂದಲೂ ಹಾಗೆವೇ"
ಗುರುವಪ್ಪ ಕೋಪದಿಂದ ನಿಸುಡುಯ್ಯುತ್ತಿದ್ದ..
ನಮ್ಮ ಕಣ್ಣುಗಳಂತೂ ಎವೆ ಬಿಡದೆಯೇ ಕುತೂಹಲಭರಿತವಾಗಿ ಇವರಿಬ್ಬರನ್ನೇ ಗಮನಿಸುತ್ತಿತ್ತು..
ಅಷ್ಟರಲ್ಲಿ ಮರದ ಮೇಲಿದ್ದ ಅಪ್ಪಿ ಗುರುವಪ್ಪನನ್ನು ನೋಡಿ,
ಅಣ್ಣಾ ಅಣ್ಣಾ ಒಂಜಿ ಪುಳಿ ದೆಪ್ಪಡಾ... ಅಂತ ದೈನ್ಯತೆಯಿಂದ ಬೇಡುವಾಗಲೇ..ಗುರುವಪ್ಪನ ಬಾಯಿಯಿಂದ... ಇಲಿ ಕೀಲ್ ರಂಡ್*****ಮೋನೇ...ಅಂತ ತರಹೇವಾರಿ ಬೈಗುಳ ಬೀಳುವಾಗ ನಾವು ಮರದ ಮೇಲೆ ನೋಡಿದರೆ ಅಪ್ಪಿ ನಾಪತ್ತೆ...
ನಮ್ಮ ಧೈರ್ಯಶಾಲಿ ಅಪ್ಪಿ ನನ್ಮಗ ಪುಳಿಮರದ ಬುಡದಲ್ಲಿ ಮಕಾಡೆ ಮಲಗಿದ್ದ... ಬಂದ ನಗುವನ್ಮು ತಡೆದುಕೊಂಡು ಓಲೇಮಾಲೇ ಓಯ್ಸಾ ಅಂತ ಎತ್ಕೊಂಡೋದ್ವಿ...
ಅಂತೂ ಪುಳಿಗೆ ಬಂದ ಅಪ್ಪಿ ಎರಡು ದಿನ ಚಳಿಜ್ವರದ ಪಾಲಾಗಿದ್ದ....
-ಮುಆದ್





